Posts

Showing posts with the label ಗೂಗಲ್

ಅಸುರಕ್ಷಿತರು ಭಾಗ - 1 : ಅನೇಕ ಬಾರಿ ನಮ್ಮ ಮಿತ್ರನೂ ಶತ್ರುವಾಗಬಲ್ಲ.. ನೆನಪಿಡಿ!!!

Image
                                      ನಾವು ಮನೆಯಲ್ಲಿದ್ದರೆ ಸುರಕ್ಷತೆಯ ಭಾವ ನಮ್ಮ ಮನದಲ್ಲಿ ಮೂಡುವುದು ಸುಳ್ಳಲ್ಲ. ನಮ್ಮ ಬೇಕು-ಬೇಡಗಳನ್ನು ಅರ್ಥೈಸಿ, ನಮ್ಮನ್ನು ಆದಷ್ಟು ಖುಷಿಯಲ್ಲಿರುವಂತೆ ಸದಾ ಕಣ್ಣನ್ನು ರೆಪ್ಪೆ ಸದಾ ಕಾಯುತ್ತಿರುವಂತೆ ಕಾಯುತ್ತಾ ಪೋಷಿಸುವ ವ್ಯಕ್ತಿಗಳು ಮನೆಯಲಿದ್ದಾರೆ ಅನ್ನುವ ಕಾರಣಕ್ಕೆ.  ಆದರೆ ಈ ಭಾವ ಮಾತ್ರ 21 ನೆಯ ಶತಮಾನದ ಆದಿಯಲ್ಲೇ ಅಂತ್ಯವಾಗುತ್ತಾ ಅನ್ನುವ ಭಾವವೂ ಕಾಡುತ್ತಿದೆ. ಅದಕ್ಕೇ ಕಾರಣಗಳೂ ಇವೆ. ನನ್ನ ಸ್ನೇಹಿತನೋರ್ವ 3-4 ವರ್ಷಗಳ ಹಿಂದೆ ಒಂದು ಮಾತನ್ನು ಹೇಳಿದ್ದು ಇವತ್ತೂ ನನ್ನ ಮನದಿಂದ ಅಳಿಸಿಲ್ಲ. "ಅಲ್ಲ ಮಾರಾಯಾ.. ನನಗೆ ಈ ಗೂಗುಲ್ಲು ತಾಯಿಯ ಭಾವ ಮೂಡಿಸುತ್ತಿದೆ. ನನ್ನ ಬೇಕು-ಬೇಡಗಳನ್ನು ಅದೆಷ್ಟು ಚೆನ್ನಾಗಿ ಅರ್ಥೈಸಿಕೊಂಡಿದೆ. ನಾನು ಬೇಕು ಅಂದ ತಕ್ಷಣ ಮನೆಯ ಬಾಗಿಲಿಗೆ ತಂದು ಕೊಡುತ್ತೆ..ನಾನು ಬೇಡ ಅಂದ ತಕ್ಷಣ ಇತರೆ ಸಲಹೆಗಳನ್ನು ನೀಡುತ್ತೆ! ಒಂಥರಾ ಕೃತಕ ತಾಯಿಯ ರೀತಿ ವರ್ತಿಸುತ್ತಿದೆ ಅಲ್ಲವಾ??" ಎಂದ. ಆತ ಹೇಳಿದ್ದೆಲ್ಲವೂ ಸತ್ಯ ಎಂಬ ಭಾವವುಂಟಾಗಿ ನನ್ನ ಮಾತುಗಳೆಲ್ಲವೂ ಆ ದಿನ ಮೌನವಾಗಿದ್ದವು.             ಈ ಅಂತರ್ಜಾಲವೊಂದು ಪರಿಚಿತವಾದ ನಂತರದಿಂದ ಜಗತ್ತು ಮೊದಲಿಗಿಂತ ಅತೀ ಹೆಚ್ಚು ಆತಂಕದಿಂದ ಜೀವಿಸುತ್...