ಹಿಂದೂಗಳಿಗೆ ಒಂದು ಕಿವಿಮಾತು : ಡಾ. ಬಿ ಆರ್ ಅಂಬೇಡ್ಕರ್ !! ಅವರ ಮಾತನ್ನು ನಾವು ಇನ್ನಾದರೂ ಕೇಳುವ ಸ್ಥಿತಿಯಲ್ಲಿದ್ದೇವಾ ???

ನನಗೆ ಚಿಕ್ಕ ವಯಸ್ಸಿರುವಾಗಲೇ ನಾನು ಕೇಳಿದ್ದ ವಿಚಾರವಾಗಿತ್ತದು. ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನು ಒಂದು ದಿವಸ ಮೀರಿಸಿ ಆಧಿಪತ್ಯವನ್ನು ಸ್ಥಾಪಿಸಬಹುದು. ನಾವೆಲ್ಲಾ ಎಚ್ಚರದಿಂದರಬೇಕೆಂಬುದಾಗಿ. ಆದರೆ ವಾಸ್ತವವಾಗಿ ಅಲ್ಪಸಂಖ್ಯಾತರು ಎಂಬುದಕ್ಕೆ ಸಮರ್ಪಕವಾದ ಅರ್ಥ ಅನೇಕರಿಗೆ ತಿಳಿದಿಲ್ಲದುದೇ ಇಂಥಹ ಗೊಂದಲಗಳಿಗೆ ಎಡೆ ಮಾಡಿರಬಹುದೆಂಬುದು ನನ್ನ ಊಹೆ. ಅದೇನೇ ಇರಲಿ. ಪ್ರಸ್ತುತ ಅಲ್ಪಸಂಖ್ಯಾತರನ್ನು ತುಳಿಯುವ ಪ್ರಯತ್ನದಲ್ಲಿಯೇ ಕಾಲಕಳೆಯುತ್ತಿರುವ ಸಂದರ್ಭದಲ್ಲಿ ವಾಸ್ತವ ಅಂಶವನ್ನು ನಿಮ್ಮ ಮುಂದಿಡಲು ಯತ್ನಿಸುವೆ. ಇದೇ ವಿಚಾರವನ್ನು ಅಂಬೇಡ್ಕರ್ ಅವರೂ ಪ್ರಸ್ತಾಪಿಸಿದ್ದರು. ಅವರ ಮಾತುಗಳನ್ನು ಒಮ್ಮೆ ಗಮನಿಸಿ. ಹಿಂದೂಗಳಿಗೆ ಒಂದು ಮಾತು ಕೋಮುವಾರು ಪ್ರಶ್ನೆಯ ಸಂಬಂಧ ಉದ್ಭವಿಸಿರುವ ಅನೇಕ ಸಮಸ್ಯೆಗಳು ಬಹುಮತ ಆಳ್ವಿಕೆ ಪರಮ ಶ್ರೇಷ್ಠವಾದದ್ದೆಂದು ಮತ್ತು ಅದನ್ನು ಯಾವ ಕಾರಣಕ್ಕಾಗಿಯೂ ಕೈಬಿಡಲಾಗದು ಎಂದು ಹಿಂದೂಗಳ ಅಚಲ ನಂಬಿಕೆಯಾಗಿದೆ. ಆದರೆ ಇದೂ ಅಲ್ಲದೆ, ವ್ಯಕ್ತಿಗಳು ಮತ್ತು ರಾಷ್ಟ್ರಗಳ ನಡುವೆ ಉದ್ಭವಿಸುವ ಸಮಸ್ಯೆಗಳ ನಿವಾರಣೆಗೆ ಒಮ್ಮತ ಅಥವಾ ಸರ್ವಾನುಮತ ಎಂಬ ಇನ್ನೂ ಒಂದು ತತ್ವ ಇದೆ ಎಂಬುದನ್ನು ಹಿಂದೂಗಳು ಅರಿತಂತೆ ತೋರುವುದಿಲ್ಲ. ಹಿಂದೂಗಳು ಈ ತತ್ವವನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡಿದ್ದೇ ಆದಲ್ಲಿ ಈ ತತ್ವ ಕೇವಲ ಕಾಲ್ಪವಿಕವಲ್ಲ, ಅದು ಇಂದು...