ಮತ್ತೆ ಬಂತು ನವೆಂಬರ್ ಹತ್ತು.. ಈ ಬಾರಿ ಏನಿದೆಯೋ ಆಪತ್ತು.!

ಇವತ್ತು ಬೆಳಿಗ್ಗೆಯಿಂದ ಫೇಸ್ ಬುಕ್ಅಲ್ಲಿ ಕಣ್ಣಾಡಿಸಿದಾಗಲೆಲ್ಲಾ ಕಂಡ ವಿಷಯ ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ನವೆಂಬರ್ ನಲ್ಲಿ ನಡೆಯಲಿರುವ ಟಿಪ್ಪು ಜಯಂತಿಯ ಆಹ್ವಾನಪತ್ರಿಕೆಯಲ್ಲಿ ತನ್ನ ಹೆಸರನ್ನು ನಮೂದಿಸಬಾರದು ಎಂದು ತಮ್ಮ ಆಪ್ತ ಕಾರ್ಯದರ್ಶಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದನ್ನೇ ದೊಡ್ಡ ವಿಷಯವನ್ನಾಗಿಸಿ ಕೆಲವು ಖಾಸಗೀ ಮಾಧ್ಯಮಗಳು ತಮ್ಮ ಓತಪ್ರೋತ ನಿರ್ಣಯವನ್ನು ಪದೇ ಪದೇ ಪುನರುಚ್ಛರಿಸಿ ಗೊಂದಲ ಎಬ್ಬಿಸಿದವು. ಕಳೆದೆರಡು ವರ್ಷಗಳಿಂದಲೂ ಸರ್ಕಾರ ಬಹುಸಂಖ್ಯಾತ ವಿರೋಧದ ನಡುವೆಯೂ ತನ್ನ ಹಟ ಸಾಧಿಸಲಿಕ್ಕಾಗಿ ಮತ್ತು ಒಂದು ಕೋಮಿನ ಓಲೈಕೆಗಾಗಿ ನಡೆಸಿಕೊಂಡುಬಂದಿರುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಅನಂತಕುಮಾರರು ಕಳುಹಿಸಿದ ಮನವಿ ಯಾಕೆ ಇಷ್ಟು ಪ್ರಾಮುಖ್ಯತೆ ಪಡೆಯಿತು ಎಂದು ಆಲೋಚಿಸುತ್ತಿದ್ದೆ. ಕಾರಣ ತಿಳಿಯದಿರಲಿಲ್ಲ. ಸಂಸದರಾಗಿದ್ದ ಹೆಗಡೆಯವರು ಸಚಿವರಾಗಿದ್ದಾರೆ. ಹಿಂದೂ ಸಂಸ್ಕೃತಿಯ ಪ್ರಬಲ ಪ್ರತಿಪಾದಕರಾದವರು ಸಣ್ಣದೊಂದು ಹೇಳಿಕೆ ಕೊಟ್ಟುಬಿಟ್ಟರೆ ಮಾನಗೇಡಿ ಮಾಧ್ಯಮಗಳಿಗೆ ಹಬ್ಬದೂಟ. ಅದನ್ನೇ ಹಿಡಿದು ತಿಕ್ಕಾಡಿ ಮಾಡಿಬಿಡುತ್ತಾರೆ. ಇನ್ನು ಇಷ್ಟು ಸಾಕಾಗುವುದಲ್ಲಾ. 'ಇಸ್ಲಾಂ ಧರ್ಮಕ್ಕೆ ಸಚಿವರಿಂದ ಅವಮಾನ..?' ಎಂಬ ಶೀರ್ಷಿಕೆಯಡಿಯಲ್ಲಿ ವೀಡಿಯೋ ಹರಿದಾಡತೊಡಗಿತು. ಟಿಪ್ಪು ಜಯಂತಿಗೆ ದಿನಗಳಿರುವಾಗಲೇ ಅಖಾಡ ರಂಗೇರುತ್ತಿರುವುದನ್ನು ಕಂಡು ಅಯ್ಯೋ ಅನ್ನಿಸುತ್ತಿದೆ. ಮುಂದೇನಾಗುತ್ತದೆ ಕಾದು ನ...